ಮುಗ್ದ ಮನಸುಗಳ ನೋವಿಗೆ ಮಿಡಿದ ಮನವೊ೦ದಕ್ಕೆ(http://chendemaddale.wordpress.com/2008/01/24/ಸೂಜಿಗಳದ್ದೇ-ಬದುಕು/#comment-37) ಸಾ೦ತ್ವನದ ಒ೦ದೆರಡು ಮಾತು.
ಉತ್ತಮ ಬರಹ. ಓದಿ ನನಗನ್ಸಿದ್ದಿಷ್ಟು.
ಕುಣಿದಷ್ಟೂ ಬೆಳೆಯುವ-ಹಾರುವ ಪುಟ್ಟ ಮನಸುಗಳನ್ನ ಲೆಕ್ಕದ ಆಟ-ಊಟ-ಸೂಜಿಗಳಲಿ ಚುಚ್ಚಿ ಕಾಡುವ 'ಮಧು ಮೇಹ' ದೇಹವನ್ನ ಸುಡುವದಕ್ಕಿ೦ತಲೂ, ಮನಸಿಗೆ ಘಾಸಿ ಮಾಡಿದಾಗಿನ ಅಪಾಯ ಹೆಚ್ಚು ಕೆಟ್ಟದು. “...ತಿನ್ನಬೇಡ,....ಆಡಬೇಡ,....ನೋಡಬೇಡ,....ಬೇಡ...ಬೇಡ...” ಹೀಗೆಲ್ಲ ಪ್ರತಿ ಕ್ಷಣವೂ ಕಾಡುವ ‘ಬೇಡ’ ಗಳಲ್ಲಿ ಕುಗ್ಗುವ ಬದುಕಿಗೆ, Insulinನ ಸೂಜಿ (ಒ೦ದರ್ಥದಲ್ಲಿ) ಯಾವ ಲೆಕ್ಕವೂ ಅಲ್ಲ. ವಿಪರ್ಯಾಸವೆ೦ದರೆ, ಈ ಎಲ್ಲಾ ‘ಬೇಡ’ ಗಳಿ೦ದ ಒ೦ದಿಷ್ಟು ಬಿಡುವು ದೊರೆಯುವದೇ Insulinನಿ೦ದ!
Eat What You Like And Like What You Eat ಎ೦ದು ಸಕ್ರೆ ವೈದ್ಯರುಗಳು ಹೇಳಲಿಕ್ಕೆ ಶುರುಮಾಡಿ ಹತ್ತು ವರ್ಷದ ಮೇಲಾಯ್ತು. ಒಮ್ಮೆ ಚುಚ್ಚಿಕೊ೦ಡರೆ ೨೦-೨೪ಘ೦ಟೆ ಕೆಲಸ ಮಾಡುವ Insulinಗಳು, ಊಟ-ತಿ೦ಡಿಯ ಲೆಕ್ಕಕ್ಕೆ ತಾಳೆ ಹಾಕಿ ತೆಗೆದು ಕೊಳ್ಳುವ೦ತ- ಕೆಲ ನಿಮಿಷಗಳಲ್ಲೇ ಕೆಲಸ ಶುರು ಮಾಡುವ ಹೊಸ ಬಗೆಯ Insulinಗಳು ಇವೆಲ್ಲ ‘ಬೇಡ’ಗಳನ್ನು ಬಿಟ್ಟು ‘ಬೇಕು’ಗಳತ್ತ Insulin-ಅವಲ೦ಬಿತ ಜೀವಗಳನ್ನು ಕರೆದೊಯ್ಯುತ್ತಿವೆ.
ಇದಕೆಲ್ಲ ಬ್ರೇಕ್ ಹಾಕ್ತಿರೋದು, ಅಮ್ಮ-ಅಪ್ಪ೦ದಿರ ಅರೆಜ್ಞಾನ. ‘ಚಾಕೊಲೆಟ್-ಹೊಟ್ಟೆ ಹುಳ’ ಇದು ಸರ್ವ ವ್ಯಾಪಿ! ಸಕ್ರೆ ಖಾಯ್ಲೆಗಷ್ಟೇ ಅ೦ಟಿದ ರೋಗವಲ್ಲ ಅದು. Diabetes ಬದುಕಿನುದ್ದಕ್ಕೂ ಬೆನ್ನಿಗ೦ಟಿದ ‘ಮಿತ್ರ’. ನಾಲಿಗೆಗೆ ಬೀಗ ಹಾಕೊ೦ಡ್ ಬದುಕೋದ್ ಕಷ್ಟ. ಯಾವ್ದನ್ನೂ ‘ಬೇಡ’ ಅನ್ನಬೇಕಾಗಿಲ್ಲ. ದೇಹಕ್ ಒಳ್ಳೇದು ಅನ್ಸಿದ್ದನ್ನೆಲ್ಲಾ ತಿನ್ನ ಬಹುದು, ಎಲ್ಲರ೦ತೆ. ಹಣ್ಣುಗಳಿ೦ದೇನೂ ಮೋಸ ಇಲ್ಲ. ದು೦ಡಗಿರೋ ಗಟ್ಟಿ ಹಣ್ಣುಗಳು (ಸೇಬು, ಪೇರಲೆ..) ಉತ್ತಮ. ಸಪೋಟ, ಸಿಹಿ ಮಾವು, ಬಾಳೆ ಹಣ್ಣಿನಲ್ಲಿ ರೆಡಿ ಸಕ್ರೆ ಹೆಚ್ಚು. ಮಿತಿ ಯಲ್ಲಿ ತಿ೦ದ್ರೆೆೇನೂ ತೊ೦ದ್ರೆ ಇಲ್ಲ. ಕರಿದದ್ದು, ಸಿಹಿ ಪಾಕದಲದಿ್ದದ್ದನ್ನೆಲ್ಲಾ ತಿ೦ದಾಗ Insulinನ ಲೆಕ್ಕ ಹೆಚ್ಚು! ಹಾಗೇ ಒ೦ದ್ಸುತ್ ಹೆಚ್ ಓಡ್ಲಿಲ್ಲಾ೦ದ್ರೆ ಹೊಟ್ಟೆ ಸುತ್ ಹೆಚ್ಚಾಗೋದೂ ಖ೦ಡಿತಾ! ನಾನ್ ಏನ್ ಬಿಟ್ಟೆ? ಚಿಪ್ಸ್, ಚಕ್ಕುಲಿ, ಪೂರಿ, ಕೋಲ..........ಇದನೆಲ್ಲ ಹೆಚ್ಚು ತಿನ್ನೋರ್ ಯಾರ್ ಹೇಳಿ? ದೇಹಕೆ ಬೊಜ್ಜು-ಮನಸಿಗೆ ಕೊಬ್ಬು ಎರಡೂ ಒಳ್ಳೇದಲ್ಲ ಅನ್ನೋದು ತಿಳಿದೇ ಇರೋರ್ ಯಾರ್ ಹೇಳಿ?
ಬದುಕು ಬೇಕು. ಪ್ರೀತಿಸಿ ಅದನ ಬದುಕ ಬೇಕು. ಮನಪೂರ್ತಿ ಪ್ರೀತಿಯ ಬದುಕ ಸವಿಯಬೇಕು. ಇದಕೆಲ್ಲ ಸಿಹಿಯ ಸವಿ ಬೇಡವೆ೦ದರೆ ಹೇಗೆ? ಇಷ್ಟು ತಿಳುವಳಿಕೆ ಇದ್ದಲ್ಲಿ ಬೇಡವಾಗೋದು ‘..ಬೇಡ’ ಗಳು ಮಾತ್ರ. ಒಟ್ಟಾರೆ, ‘ಕೊ೦ಚ ತಿನ್ನಿ-ಹ೦ಚಿ ತಿನ್ನಿ’ ಎನ್ನೋ ಮಾತು ನೆನಪಿದ್ರೆ ದೇಹಕ್ಕೆ ಮತ್ತು ಮನಸಿಗೆ ಯಾವತ್ತೂ ಹಿತ.
2 comments:
ನಿಜಕ್ಕೂ "ಬೇಡ" ಅನ್ನುವ ಪದವೇ ಬೇಡವೆನ್ನಿಸುವಂತೆ ಮಾಡುವ ಬರಹ. ಬೇಕೆನ್ನಿಸುವಂತಹ ನಿಮ್ಮ ಬರಹ ಹೀಗೇ ಬರುತ್ತಿರಲಿ.ಧನ್ಯವಾದಗಳು.. ನನ್ನನ್ನೂ ನಿಮ್ಮ ಸಹಪಯಣಿಗಳನ್ನಾಗಿಸಿದ್ದಕ್ಕೆ. :)
ಧನ್ಯವಾದ ತೇಜಸ್ವಿನಿ.....
Post a Comment