Wednesday 25 July 2018

ಕನ್ನಡಿಯಾತ.... !

ಕನ್ನಡಿಯಾತ.... !



ನಿನ್ನೆ ಸಂಜೆ ವಾಟ್ಸಾಪ್ಪ್ನಲ್ಲಿ ಗೆಳೆಯನೊಬ್ಬ ಕಳಿಸಿದ Dale Wimbrow's famous The Man in the Glass (1934) ಕವನದ ಕನ್ನಡೀಕರಣ:

ಕನ್ನಡಿಯಾತ.... !

ನೀ ಸುರಿಸಿದ ಬೆವರೆಲ್ಲ ಸೇರಿ
ಬಯಕೆ ಬಟ್ಟಲು ತುಂಬಿ ಸೋರಿ
ತಲೆಯ ಮೇಲೇರೆ ಜಂಭದ ಗರಿ
ಕನ್ನಡಿಯಲಿ ಇಣುಕಿ ಒಂದು ಬಾರಿ 
ಕೇಳವನ ನುಡಿಅದು ನಿನ್ನ ಸಿರಿ!

ಹೆತ್ತಮ್ಮಅಪ್ಪಕೈ ಹಿಡಿದ ನಾರಿ
ಅಳೆಯುವ ದೂರವಲ್ಲ ಬದುಕಿನ ಗುರಿ
ಕನ್ನಡಿಯೊಳಗಿಂದ ಕಣು್ಣ ತೂರಿ
ಅವನು ತೋರಿದ್ದೇ ನಿನ್ನ  ಸರಿ ದಾರಿ. 

ಬೇಕಿಲ್ಲ ಉಳಿದೋರ ಉಸಾಬರಿ
ಅವನಿರಲು ನಿನ್ನುಸಿರಿನಲಿ ಸೇರಿ
ಕಡುಕಷ್ಟದಾಪತ್ತುಗಳ ದಾಟುವೆ ಹಾರಿ
ಜೊತೆಯಿರೆ ಕನ್ನಡಿಯಾತನ ಸ್ನೇಹಸಿರಿ!

ಜಗಕೆಲ್ಲ ಊದುತ್ತ ಸುಳಿ್ಳನ ತುತೂ್ತರಿ
ಹತಿ್ತ ಕುಳಿತರೂ ಶಹಬಾ್ಬಸ್ಗಿರಿ
ಕಡೆಗುಳಿವ ಗರಿ ಕಣೀ್ಣರುಎದೆಯುರಿ
ಕಣ್ಕಟ್ಟಿ ನಿಲ್ಲೆ ನೀ ಕನ್ನಡಿಯಾತಗೆ ಬೆನ್ನುತೋರಿ!



ಮುರಳಿ ಹತ್ವಾರ್ (ಜುಲೈ ೨೦೧೮)

(ಪೀಟರ್ ಡೇಲ್ ವಿಂಬ್ರೌ ೧೯೩೪ರಲ್ಲಿ ಬರೆದ The Man in the Glass ಕವನದ ಭಾವಾಂತರ)




When you get what you want in your struggle for self
And the world makes you king for a day
Just go to the mirror and look at yourself
And see what that man has to say.

For it isn’t your father, or mother, or wife 
Whose judgment upon you must pass
The fellow whose verdict counts most in your life
Is the one staring back from the glass.

He’s the fellow to please – never mind all the rest
For he’s with you, clear to the end
And you’ve passed your most difficult, dangerous test
If the man in the glass is your friend.

You may fool the whole world down the pathway of years
And get pats on the back as you pass
But your final reward will be heartache and tears
If you’ve cheated the man in the glass. 

2 comments:

Unknown said...

ಕನ್ನಡಿಯ ಬಿಂಬ ಆತ್ಮಸಾಕ್ಷಿಯ ಸಂಕೇತ.ಆತ್ಮಪೂರಕವಾದ ಸಾದನೆ ಅನನ್ಯ.ಆತ್ಮವಂತನೆಯ ಬಾಳು ನಗಣ್ಯ .ಸರಳ ಸುಂದರ ಅನುವಾದ.ಸಾರ ನಿರ್ವಿವಾದ.

Unknown said...

ಕನ್ನಡಿಯ ಬಿಂಬ ಆತ್ಮಸಾಕ್ಷಿಯ ಸಂಕೇತ.ಅದುಒಪ್ಪುವಂತೆ ನಡೆದರೆ ನಿಜಸುಖ.ಆತ್ಮವಂತನೆಯಾಗಿದ್ದರೆ ಅದು ಪೊಳ್ಳುಸಾಧನೆ ಸುಳ್ಳುಸುಖ.ಸರಳ ಸಂದರಪ್ರಾಸಬದ್ದ ಅನುವಾದ.