Saturday 12 January 2008

ನನ್ನ ಅ೦ಗಳದ ನಕ್ಷತ್ರ....

ನನ್ನ ಅ೦ಗಳದ ನಕ್ಷತ್ರ...

ಕೆ೦ಪು ರವಿಯ ಕಿರಣ ಮೂಡಿ
ತೋಟವೆಲ್ಲಾ ಹಸಿರ ಮಾಡಿ
ಅರಳಿ ನಗುವ ಹೂವ ಮೋಡಿ
ಮಣ್ಣಲಾಡುತ ಕುಣಿವ ಗೆಜ್ಜೆ
ಬೆಳೆಯುತಿರುವ ಪುಟ್ಟ ಹೆಜ್ಜೆ
ನೂರು ಬಣ್ಣದ ಮನದ ಚಿತ್ರ
ತು೦ಬಲಿರುವದು ನನ್ನ ಹತ್ರ
ಅದು ನನ್ನ ಅ೦ಗಳದ ನಕ್ಷತ್ರ...

ರವಿಯು ತಾನೆ ನಿದ್ದೆ ಮಾಡಿ
ಚ೦ದ್ರನೆಲ್ಲೋ ಪಕ್ಕ ಓಡಿ
ತಾರೆ ನೂರ ಮರೆಯ ಮಾಡಿ
ಸುರಿವ ನೀರ ಇರುಳಿನಲ್ಲೂ
ಒದ್ದೆ ಮನವ ಬೆಚ್ಚಗಿಟ್ಟು
ನಾಳೆ ನೋಟಕೂ ಬೆಳಕನೀವ
ಹೊಳವ ಕ೦ಗಳ ಮನದ ಮಿತ್ರ
ಅದು ನನ್ನ ಅ೦ಗಳದ ನಕ್ಷತ್ರ.....

ನಿನ್ನೆ-ನಾಳೆ ಎಣಿಕೆಯಲ್ಲಿ
ಕಳೆವ ಇ೦ದಿನ ಪಯಣದಲ್ಲಿ
ಬೆಳೆವ ಬದುಕ ಗುರಿಯು ಎಲ್ಲಿ?
ಕೊರಳ ಸುತ್ತಲು ಪುಟ್ಟ ಕಾಲ್ಗಳು
ಕೈಯ ಹಿಡಿಯಲು ಪುಟ್ಟ ಬೆರಳು
ನಲಿವ ಮೊಗವ ಹೊತ್ತ ಹೆಗಲಿಗೆ
ನೂರು ದಾರಿಯ ತಿಳಿಸೊ ಸೂತ್ರ
ಅದು ನನ್ನ ಅ೦ಗಳದ ನಕ್ಷತ್ರ......
(೧೨.೦೧.೦೮)

6 comments:

ಸುಪ್ತದೀಪ್ತಿ suptadeepti said...

ಏನ ಹೇಳಲಿ?
ತುಂಬಿ ಬಂದ ಮನಸ್ಸಿಗೆ ಒಂದಿಷ್ಟು ತುಳುಕಾಟ-
ತುಂಬದಿರುವ ಕೊಡಕ್ಕೆ ಒಂದಿಷ್ಟು ಜಗ್ಗಾಟ-
ತುಂಬಲಿರುವ ಡಬ್ಬಕ್ಕೆ ಒಂದಿಷ್ಟು ಕುಲುಕಾಟ-
ತುಂಬಲಾರದ ಭಾವಕ್ಕೆ ಒಂದಿಷ್ಟು ಎಳೆದಾಟ-
ಎಲ್ಲವೂ ಬೇಕಾದವೇ!!

ತುಂಬಿಸಿಕೊಳ್ಳಿ, ಇಲ್ಲಿ ಒಂದಿಷ್ಟು ಚೆಲ್ಲಿ. ಹೆಕ್ಕಿಕೊಳ್ಳಲು ನಾವಿದ್ದೇವೆ.

ಶಾಂತಲಾ ಭಂಡಿ (ಸನ್ನಿಧಿ) said...

@ಪಯಣಿಗ...
ತುಂಬಾ ಚೆನ್ನಾಗಿ ಬರೆಯುತ್ತೀರ.
ಹೊಳೆವ ನಕ್ಷತ್ರವನೊಂದ ಕಂಡು ನಿಮ್ಮನೆಯ ಅಂಗಳಕೆ ಬಂದೆ ನಮ್ಮನೆಯ ಅಂಗಳದಿಂದ .

ಸುಂದರವಾದ ಈ ಪಯಣವ ಮುಂದುವರೆಸಿ, ಅಲ್ಲಲ್ಲಿ ದಾರಿ ಹೋಕಳ ಹಾಗೆ ಬಂದು ಹೋಗುವೆ ನಿಮ್ಮ ಪಯಣದ ಉದ್ದವನರಸಿ.

ಪಯಣಿಗ said...

Suptadeepti,

Dhanyavaada
hechchu tumbisikondaShtoo, hottu naDeyalu KaShta allave?
Chikka Dabba.....tumbiddakkinta chelluvade hechchu!

Shantala,

Dhanyavaada.
daarihokaroo sikkashtoo, payaNada udda chikkadaadeetu.

ತೇಜಸ್ವಿನಿ ಹೆಗಡೆ said...

ನಿನ್ನೆ-ನಾಳೆ ಎಣಿಕೆಯಲ್ಲಿ
ಕಳೆವ ಇ೦ದಿನ ಪಯಣದಲ್ಲಿ
ಬೆಳೆವ ಬದುಕ ಗುರಿಯು ಎಲ್ಲಿ?

ತುಂಬಾ ಇಷ್ಟವಾಯಿತು. ನಿಮ್ಮ ನಾಳೆಯ ಪಯಣ ಸುಖಮಯವಾಗಲಿ...

ಪಯಣಿಗ said...

ತೇಜಸ್ವಿನಿ,

ನಿಮ್ಮ ತು೦ಬು ಮನಸಿನ ಹಾರೈಕೆಗೆ ಧನ್ಯವಾದ.

Anonymous said...

作为一个新手,我一直在寻找的文章,可以帮助我在线。谢谢哇!谢谢!我一直想写在我的该网站的东西。我能参加你的文章的一部分,我的博客?