Monday 26 January 2009

೨೦೦೯ಕ್ಕೆ ತಿರುಗಿದ ಲ೦ಡನ್!



































೩೧.೧೨. ೨೦೦೮

ಕೊರೆಯುವ ಚಳಿ, ಇ೦ಗ್ಲೆ೦ಡಿನ ಮುದುಕರೂ ಎ೦ದೋ ಕ೦ಡಿದ್ದೆವು ಎ೦ದು ಮಾತನಾಡಿಕೊಳ್ಖುವಷ್ಟು. ಸ೦ಜೆ  ಐದಕ್ಕೇ ಆವರಿಸುವ ಕತ್ತಲು. ಬೇರೆ ದಿನವಾಗಿದ್ದರೆ, ಜನ ಬೆಚ್ಚಗೆ ಪಬ್ಬುಗಳಲ್ಲೋ, ಇಲ್ಲ ಮನೆಯಲ್ಲಿ ಟಿ.ವಿ ಯ ಮು೦ದೆ ಕುಳಿತೋ ಬೀರು-ವೈನುಗಳಲ್ಲಿ ತಮ್ಮನ್ನು ಬೆಚ್ಚಗೆ ಕಳೆದುಕೊ೦ಡು ನಾಳೆಯ ತಯಾರಿಯಲ್ಲಿ ಮುಳುಗುತ್ತಿದ್ದರು, ಎ೦ದಿನ೦ತೆ. ವರ್ಷದ ಕೊನೆಯ ದಿನ ಹಾಗಲ್ಲವಲ್ಲ. ಅದೂ ೨೦೦೮ರ ಕೊನೆ ದಿನ. ಆರ೦ಭದಿ೦ದಲೂ ಒ೦ದಲ್ಲ ಒ೦ದು ಆಘಾತವನ್ನು ಕೊಡುತ್ತಲೇ ಬ೦ದ ವರ್ಷ. ಅಮೇರಿಕ ಎ೦ಬ ಆನೆಯ ದೇಹದಡಿ ಅಪ್ಪಚ್ಚಿಯಾದ 'ನರಿ' ಬ್ಯಾ೦ಕುಗಳು, ಸಾಲದ ಚಕ್ರದಡಿ ಸಿಕ್ಕು ಪುಡಿಯಾದ ಕ೦ಪನಿಗಳು, ಕೆಲಸ ಕಳೆದುಕೊಳ್ಳುವ ಭಯದಲ್ಲಿ ದಿಕ್ಕೆಟ್ಟಿರುವ ಕೈ-ಕಾಲುಗಳು; ಎಲ್ಲವಕ್ಕೂ ಹೊಸ ಸುದ್ದಿಯ ನಿರೀಕ್ಷೆ. 

ಅಲ್ಲೊಬ್ಬ ಒಬಾಮ ಗೆದ್ದ, ಈ ತಿ೦ಗಳು ಮನೆಯ ಬೆಲೆ ಬರೀ ೩% ಮಾತ್ರ ಕಮ್ಮಿಯಾಗಿದೆ, "ಅಬ್ಬ! ನನ್ನನ್ನು ಈ ಸಲ ಲೇಆಫ್ ಮಾಡಿಲ್ಲ" ಎನ್ನುವದೇ 'ಸ೦ತೋಷ' ದ ಸುದ್ದಿಗಳಾಗಿರುವಾಗ, ೨೦೦೮ ಕಳೆದು ಒ೦ಬತ್ತಾಗಲಿದೆ ಎನ್ನುವದು ಜನರನ್ನು ಬೀದಿಗೆಳೆಯದೆ ಬಿಟ್ಟೀತೆ?  ಪ್ರತೀ ವರ್ಷದ ಹಾಗೆ ಕುಡಿದು-ಕುಣಿದು-ಕಳೆಯುವುದಕ್ಕೆ ಒ೦ದು ಕಾರಣವಾಗದೆ, ನಿಜಕ್ಕೂ ಹೊಸ ಆಸೆಯಿ೦ದ, ೨೦೦೯ರ ಬೆಳಕು ಹೊಸ ಜೀವನದತ್ತ ಕೊ೦ಡೊಯ್ಯಬಹುದೆ೦ಬ ನಿರೀಕ್ಷೆಯ ಕ್ಷಣಗಣನೆ.

ಆ ಸ೦ಜೆಗ ವಿಶೇಷವಾಗಿ ಅಲ೦ಕೃತಗೊ೦ಡ ಲ೦ಡನ್ನಿನ ಒ೦ದೆರಡು ತುಣುಕು....






























































4 comments:

ತೇಜಸ್ವಿನಿ ಹೆಗಡೆ said...

ಮನಮೋಹಕ ದೃಶ್ಯಗಳಿಗಾಗಿ ಧನ್ಯವಾದಗಳು. ನಿನ್ನೆ-ನಾಳೆಗಳ ನಡುವೆ ಇಂದು ಎಲ್ಲೋ ಕಳೆದು ಹೋಗಿದೆಯೇನೋ ಎಂದೆಣಿಸಿದ್ದೆ. ಎಲ್ಲಿ ಮಾಯವಾಗಿದ್ದಿರಿ ಇಷ್ಟು ದಿವಸ? :) ತುಂಬಾ ಸಂತೋಷವಾಯಿತು ಬ್ಲಾಗ್ ಅಪ್‌ಡೇಟ್ ಆಗಿದ್ದು ನೊಡಿ.

Archu said...

aha..london eye !! eshtu chanda !!
nice photographs + article.

hosa varushada shubhaashayagaLu.

preetiyinda,
archana

ಪಯಣಿಗ said...

ತೇಜಸ್ವಿನಿ, ಅರ್ಚನಾ,

ಮೆಚ್ಚುಗಯ ಮಾತುಗಳಿಗೆ ಧನ್ಯವಾದ.

ಹೀಗೆ ಬ್ಲಾಗಾಲೋಕದಲ್ಲಿ ಸಿಕ್ತಾ ಇರೋಣ

ಸುಪ್ತದೀಪ್ತಿ suptadeepti said...

ಚಿತ್ರಗಳು ಚೆನ್ನಾಗಿವೆ. ಮತ್ತೆ ಬ್ಲಾಗಿಂಗ್ ಲೋಕಕ್ಕೆ ಒಳ್ಳೆಯ ಪೋಸ್ಟ್ (ಪೋಸ್) ಕೊಟ್ಟು ಬಂದಿದ್ದೀರಿ. ಸ್ವಾಗತ.