ಹಣ್ಣೆಲೆಯ ಉರುಳಿಸಿ
ಮರವ ಚಿಗುರಿಗಪ್ಪಿಸುವ
ಸೊಬಗು....
ಬಿಳಿ ಹಾಸಿನೊಳವಿತಿದ್ದ
ತಿಳಿ ಹಸಿರು ಹನಿಯೊಡೆವ
ಬೆರಗು....
ಇ೦ಚರದ ಅಲೆಗಳಲಿ
ಓಕುಳಿ ಅಳೆವ ರೆಕ್ಕೆಗಳ
ಮೆರುಗು....
ಮ೦ಜಿನ ಮನದ೦ಗಳ
ಹೊಳೆದ೦ಜಿ ಕರಗುವ ಹೊಸ
ಬೆಳಗು....
ನಿನ್ನೆಯ ಅನುಭಾವಕ್ಕೆ ಇ೦ದಿನ ಅನುಭವವ ಕೂಡಿಸಿ ಬರುವ ನಾಳೆಗೆ ಕಾಯುತ್ತಿರುವ ನನ್ನ ಭಾವಕ್ಕೆ ಬ೦ದ ವಿಚಾರವನ್ನು ಹೀಗೆ ಹರಡಿದ್ದೇನೆ. ನಿಮ್ಮ ಮನಸಿಗೆ ಮುಟ್ಟಿದಲ್ಲಿ, ನಿಮ್ಮ ಭಾವಲಹರಿಯನ್ನು ನನ್ನತ್ತ ಹರಿಬಿಡಿ. ನನ್ನ ನಾಳಿನ ಪಯಣಕ್ಕಾದರೂ ಅನುಕೂಲವಾದೀತು.
3 comments:
ವಸಂತಮಾಸದ ನಿರೀಕ್ಷೆಯಲ್ಲಿರುವ ಶಿಶಿರನ ಬೆಳಗು ಸುಂದರವಾಗಿದೆ.
ಧನ್ಯವಾದ ತೇಜಸ್ವಿನಿಯವರೆ,
ಹೀಗೆ ಬಿಡುವಿನ ಒ೦ದು ಭಾನುವಾರ ಬೆಳಗ್ಗೆ ಹೊಳೆದದ್ದು....ವಸ೦ತಮಾಸದ ನಿರೀಕ್ಷೆ ಎಲ್ಲರಿಗೂ ಅಲ್ಲವೇ?
ಪಯಣಿಗರೆ,
ತಮ್ಮ e-mail Idಯನ್ನು ಕೊಡುವಿರಾ? ನನ್ನ ಕಥಾ ಸಂಕಲನ (ಕಾಣ್ಕೆ) ಹಾಗೂ ಕವನ ಸಂಕಲನ (ಪ್ರತಿಬಿಂಬ) ಪುಸ್ತಕಗಳು ಬಿಡುಗಡೆ ಯಾಗುತ್ತಿವೆ. ಅದರ ಆಹ್ವಾನ ಪತ್ರಿಕೆಯನ್ನು ತಮಗೆ ಕಳುಹಿಸಲೋಸುಗ.
ಧನ್ಯವಾದಗಳು.
ತೇಜಸ್ವಿನಿ ಹೆಗಡೆ.
Post a Comment