Saturday 9 February 2008

ಕಾರಣ?

ಯಾರೋ ಕೇಳಿದ ಪ್ರಶ್ನೆ, ಶಬ್ದಗಳ ದಾಳಿಗೆ ಮನಸ್ಸಿನಿ೦ದ ಸೋರಿದ್ದನ್ನ ಒರೆಸಿ ಹಿ೦ಡಿದ್ದು....

ಕಾರಣ?

ನಿನ್ನೊಳಗೇ ಹುಡುಕು....

ತಳುಕು-ಬಳುಕು ಬಗಲಿಗಿಟ್ಟು
ಹೊಳಪಿನೆಲ್ಲ ಹಗಲ ಹೊತ್ತು
ನಗೆಯ ಬೆಳಕ ಮೊಗದಿ ಇಟ್ಟು
ಮನದ ಆಳಕೆ ಇಳಿದು ಇಷ್ಟು
ನಿನ್ನೊಳಗೇ ಹುಡುಕು....

ಭಯದ ಕತ್ತಲೊಳು ಹುದುಗಿ
ಕೊಳೆದು ಬೆಳೆದಿಹ ಕಹಿ ಬೆತ್ತಲ
ಅರಿವ ಪ್ರಭೆಯೊಳು ಮೀಯಿಸಿ
ಸವಿ ಬೆರಗಿಟ್ಟು ಕರಗಿಸಲೊಮ್ಮೆ
ನಿನ್ನೊಳಗೇ ಹುಡುಕು....

ಓಡುತಿಹುದು ಬಾಳ ಮಾಯಾರಥ
ಕಾಣದಾ ರಥಿಕನಾರೋ ಬರೆದ ಪಥ
ಜತನದಾ ಪಯಣ ಪತನ ನಿಧಾನ
ಕಥನ ಕೋರುವ ಗುರಿಯನೊಮ್ಮೆ
ನಿನ್ನೊಳಗೇ ಹುಡುಕು....

5 comments:

ತೇಜಸ್ವಿನಿ ಹೆಗಡೆ said...

ಕವನ ತುಂಬಾ ಮನ ಮುಟ್ಟಿತು. ನಿಜಕ್ಕೂ ನನ್ನನ್ನು ನನ್ನೊಳಗೇ ಹುಡುಕುವಂತೆ ಮಾಡಿತು.

ಪಯಣಿಗ said...

ಧನ್ಯವಾದ ತೇಜಸ್ವಿನಿ,

ಹುಡುಕಾಟದ ಪಯಣಕ್ಕಿಷ್ಟು ಬಲ ನೀಡಿದ್ದಕ್ಕೆ

sunaath said...

Beautiful!

Shree said...

ಪದ ಛಲೋ ಅದ! ಇದಕ್ಕ ರಾಗ ಕಟ್ಟೋಣಂತಲಾ ...

Shree said...

ಮೂರೋ ನಾಕೋ ಬಸ್ ಯಾತ್ರೀ ಮಾಡಿದ್ದೇ ತಡ, ಕಡೀಗೆ ಇದಕ್ಕ ರಾಗ ಸಿಕ್ಕೇ ಬಿಡ್ತು ..ಕೊನೀ ಸಾಲು ಬರೋಬರ ತ್ರಾಸ ಕೊಡ್ಲಿಕ್ಹತ್ತಿತ್ತು.. ಈಗ ಎಲ್ಲ ನೆಟ್ಟಗ ಕುಂತಾವ..